MLA Yatnal: ಬಿಟೌನ್ ಖಾನ್​ಗಳು ಪಾಕಿಸ್ತಾನದ ಏಜೆಂಟ್​ಗಳು; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿ ನರೇಂದ್ರ ಮೋದಿ ಹುಟ್ಟಿರೋದೆ ಹಿಂದೂ ರಾಷ್ಟ್ರ ಮಾಡಲಿಕ್ಕೆ. ಪ್ರಧಾನಿ ಮೋದಿ ಹುಟ್ಟಿರೋದೆ ಅಖಂಡ ಭಾರತ ಮಾಡಲಿಕ್ಕೆ. ಹಿಂದೂಗಳು ಹೆಚ್ಚಿರೋದು ಹಿಂದೂ ರಾಷ್ಟ್ರ, ಮುಸ್ಲಿಮರು ಹೆಚ್ಚಿರೋದು ಪಾಕಿಸ್ತಾನ. ಮುಂದೇ ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರವೇ ಭಾರತದ ವಶವಾಗಲಿದೆ ಅಂತ ಹೇಳಿದ್ರು.


  ಸರ್ಕಾರಿ ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು (Pandit Jawaharlal Nehru) ಅವರ ಫೋಟೋ ಬಿಟ್ಟ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basanagowda Patil Yatnal) ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೂಗಳ ರಕ್ತಪಾತಕ್ಕೆ ಪಂಡಿತ ಜವಾಹರಲಾಲ್ ನೆಹರು ಕಾರಣ. ಫೋಟೋ ಬಿಟ್ಟಿದ್ದು ತಪ್ಪೇನಲ್ಲ, ನೆಹರು ಕೊಡುಗೆ ದೇಶಕ್ಕೇನಿದೆ. ಮೊದಲ ಪ್ರಧಾನಿ ನೆಹರು ಇರಬಹುದು, ಆದರೆ ನಮ್ಮ ಲೆಕ್ಕದಲ್ಲಿ ಮೊದಲ ಪ್ರಧಾನಿ ನೇತಾಜಿ ಸುಭಾಷಚಂದ್ರ ಬೋಸ್ (Subhas Chandra Bose). ದೇಶದ ಈ‌ ಪರಿಸ್ಥಿತಿಗೆ ನೆಹರು ಕಾರಣ. ಕಾಶ್ಮೀರಕ್ಕೆ 370 ವಿಶೇಷ ಆರ್ಟಿಕಲ್ ಕೊಟ್ಟರು.ಭಾರತ ಪಾಕಿಸ್ತಾನ ದೇಶ ಒಡೆದದ್ದೇ ನೆಹರು ಅವರನ್ನ ಪ್ರಧಾನಿಯನ್ನಾಗಿ ಮಾಡಲು. ಹಾಗಾಗಿ ದೇಶ ಇಬ್ಭಾಗವಾಗಲು ನೆಹರು ಕಾರಣ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.

ವಲ್ಲಭಾಯಿ ಪಟೇಲ್ ಅಥವಾ ಸುಭಾಷ ಚಂದ್ರ ಬೋಸ್ ಪ್ರಧಾನಿಯಾಗಿದ್ದರೆ ದೇಶ ಇಬ್ಭಾಗ ಆಗುತ್ತಿರಲಿಲ್ಲ. ಗಾಂಧಿ ಅವರು ನೆಹರು ಪ್ರಧಾನಿಯಾಗಲಿ ಎಂದು ಹಠ ಹಿಡಿದರು. ಅದಕ್ಕಾಗಿ ದೇಶ ಇಬ್ಭಾಗ ಮಾಡಿ ಕೊಟ್ಟರು. ಪಾಕಿಸ್ತಾನಕ್ಕೆ ಅನುಕೂಲವಾಗಲು ಕಾಶ್ಮೀರಕ್ಕೆ 370 ಕೊಟ್ಟರು.ಒಂದು ವೇಳೆ ವಲ್ಲಭಭಾಯಿ ಪಟೇಲ್ ಇರದಿದ್ದರೆ ಹೈದರಾಬಾದ್ ನಮ್ಮ ಭಾಗದಲ್ಲಿ ಇರುತ್ತಿರಲಿಲ್ಲ. ದೇಶ ಇಬ್ಭಾಗಕ್ಕೆ ಅಂಬೇಡ್ಕರ್ ವಿರೋಧಿಸಿದ್ರು

ಬಾಬಾ ಸಾಹೇಬ್ ಅಂಬೇಡ್ಕರ್ ಪಾಕಿಸ್ತಾನ ಇಬ್ಭಾಗಕ್ಕೆ ವಿರೋಧಿಸಿದ್ದರು. ಭಾರತ ಒಡೆಯಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು.ಒಂದು ವೇಳೆ ಅನಿವಾರ್ಯ ಬಂದರೆ ರಾಷ್ಟ್ರಾಂತರ ಮಾಡಿ ಎಂದಿದ್ದರು. ಪಾಕಿಸ್ತಾನದಲ್ಲಿ ಹಿಂದುಗಳನ್ನು ಭಾರತಕ್ಕೆ ತನ್ನಿ, ಇಲ್ಲಿರುವ ಮುಸ್ಲಿಂ ಅವರನ್ನು ಪಾಕಿಸ್ತಾನ ಕಳುಹಿಸಿ ಅಂತ ಅಂಬೇಡ್ಕರ್ ಹೇಳಿ


ದ್ದರು ಬಸನಗೌಡ ಪಾಟೀಲ್ ಯತ್ನಾಳ್

ಇದನ್ನೂ ಓದಿ: Lal Singh Chaddha: ಆಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೆ ಸಿಕ್ಕ ರೇಟಿಂಗ್ ಎಷ್ಟು?

ನೆಹರು ಫೋಟೋ ಬಿಟ್ಟಿದ್ದಕ್ಕೆ ಬೇಸರ ಇಲ್ಲ

ಇಸ್ಲಾಂ ಧರ್ಮದಲ್ಲಿ ಮತ್ತೊಂದು ಧರ್ಮದವರನ್ನು ಸಹೋದರರಂತೆ ನೋಡುವ ಸಂಸ್ಕೃತಿ ಇಲ್ಲ. ನೀವೆಲ್ಲ ಭಾರತಕ್ಕೆ ಬನ್ನಿ ಅಲ್ಲಿ ನೀವು ಸುರಕ್ಷಿತರಿಲ್ಲ ಎಂದು ಪಾಕಿಸ್ತಾನದ ದಲಿತರಿಗೆ ಅಂಬೇಡ್ಕರ್ ಕರೆ ಕೊಟ್ಟರು. ಕೇವಲ ಪಂಡಿತ ಜವಾಹರಲಾಲ್ ನೆಹರು ಕಾರಣದಿಂದ ಭಾರತ ಇಭ್ಬಾಗವಾಯ್ತು. ಇವರ ಕಾರಣದಿಂದಲೇ ಕೋಟ್ಯಾಂತರ ಹಿಂದುಗಳ ರಕ್ತಪಾತವಾಯಿತು. ಹೀಗಾಗಿ ನೆಹರು ಅವರನ್ನು ಜಾಹೀರಾತಿನಿಂದ ಬಿಟ್ಟಿದ್ದಕ್ಕೆ ಯಾವುದೇ ಬೇಸರವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮ ಆದರ್ಶ ಏನಿದ್ದರೂ ವಲ್ಲಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರಬೋಸ್, ವಾಜಪೇಯಿ, ಮೋದಿ ಎಂದರು.

ಅಮೀರ್ ಖಾನ್ ವಿರುದ್ಧ ವಾಗ್ದಾಳಿ

ಇದೇ ವೇಳೆ ಲಾಲ್ ಸಿಂಗ್ ಚಡ್ಡಾ ಚಿತ್ರ ವಿವಾದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಟ ಅಮೀರ್ ಖಾನ್ ನಾಗರ ಹಾವಿಗೆ ಹಾಲು ಹಾಕುವುದು ಅವಮಾನ ಎನ್ನುತ್ತಾನೆ. ಹಾಗಾದ್ರೆ ಬಕ್ರೀದ್ ವೇಳೆ ಕುರಿ ಕೊಯ್ಯೋದನ್ನ ಮೂಢನಂಬಿಕೆ ಅನ್ನಲ್ಲ. ಹಿಂದೂ ದೇವತೆಗಳನ್ನು ಅಸಹ್ಯಕರವಾಗಿ ಚಿತ್ರಿಸುತ್ತಾನೆ. ಹಿಂದು ಧರ್ಮದ ವಿರುದ್ಧ ಅವನ ಚಿತ್ರಗಳು ಬರುತ್ತವೆ.

ಖಾನ್​ಗಳು ಪಾಕಿಸ್ತಾನದ ಏಜೆಂಟ್

ಶಾರುಖ್ ಖಾನ್, ಸಲ್ಮಾನ ಖಾನ್, ಸೈಫ ಅಲಿ ಖಾನ್, ಅಮೀರ್ ಖಾನ್ ಪಾಕಿಸ್ತಾನದ ಎಜೆಂಟರಾಗಿ ಕೆಲಸ ಮಾಡುತ್ತಾರೆ. ಈ ದೇಶದ ಅನ್ನ ತಿಂದು, ಈ ದೇಶದ ಅಭಿಮಾನಿಗಳು ಚಿತ್ರ ನೋಡಿ ಹಣ ಕೊಟ್ಟಿರುತ್ತಾರೆ. ಹಿಂದುತ್ವಕ್ಕೆ ಅಪಮಾನ ಮಾಡಿದ್ದಾರೆ ಅದಕ್ಕೆ ತಕ್ಕ ಶಾಸ್ತಿ ಆಗಬೇಕು. ಅಮೀರ್ ಖಾನ್ ಚಡ್ಡಿ ತೊಯ್ಯುವಂತೆ ದೇಶದ ಹಿಂದುಗ


ಳು ಮಾಡಿದ್ದಾರೆ ಎಂದರು.ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​

ಇದನ್ನೂ ಓದಿ: Veer Savarkar Vs Tipu Sultan: ಮುಸ್ಲಿಂ ಗೂಂಡಾಗಳ ಮನಸ್ಥಿತಿ ಇನ್ನೂ ಬದಲಾಗಿಲ್ಲ: ಕೆ ಎಸ್ ಈಶ್ವರಪ್ಪ

ಪ್ರಧಾನಿ ನರೇಂದ್ರ ಮೋದಿ ಹುಟ್ಟಿರೋದೆ ಹಿಂದೂ ರಾಷ್ಟ್ರ ಮಾಡಲಿಕ್ಕೆ. ಪ್ರಧಾನಿ ಮೋದಿ ಹುಟ್ಟಿರೋದೆ ಅಖಂಡ ಭಾರತ ಮಾಡಲಿಕ್ಕೆ. ಹಿಂದೂಗಳು ಹೆಚ್ಚಿರೋದು ಹಿಂದೂ ರಾಷ್ಟ್ರ, ಮುಸ್ಲಿಮರು ಹೆಚ್ಚಿರೋದು ಪಾಕಿಸ್ತಾನ. ಮುಂದೇ ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರವೇ ಭಾರತದ ವಶವಾಗಲಿದೆ ಅಂತ ಹೇಳಿದ್ರು.

Post a Comment

Previous Post Next Post