ಅಯ್ಯಪ್ಪನ ಪ್ರಸಿದ್ಧ ಅರವಣ ಪಾಯಸಂ
ಚಳಿ, ಮಳೆ, ಬಿಸಿಲು ಎನ್ನದೇ ಅಯ್ಯಪ್ಪನ ವೃತ ಮಾಡುವ ಭಕ್ತರು ಅದ್ಯಾವುದನ್ನೂ ಲೆಕ್ಕಿಸದೇ ಅಯ್ಯಪ್ಪ ಸ್ವಾಮಿ ದರ್ಶನ ಮಾಡುತ್ತಾರೆ. ಇನ್ನು ದೇವಾಲಯದಲ್ಲಿ ಮಾರಾಟ ಮಾಡುವ ‘ಅರವಣ ಪಾಯಸಂ’ (aravana payasam) ಅನ್ನು ಭಕ್ತರು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ. ಆದರೆ ಇದೀಗ ಈ ಪ್ರಸಿದ್ಧ ಪಾಯಸ ಪ್ರಸಾದಕ್ಕೆ ಕಂಟಕ ಬಂದಿದೆ!ಶಬರಿಮಲೆ, ಕೇರಳ: ಭಾರತದಲ್ಲಿರುವ ದೇಗುಲಗಳ ಪೈಕಿ ಶಬರಿಮಲೆ ದೇವಸ್ಥಾನ (Sabarimala temple) ಪ್ರಸಿದ್ಧ ದೇವಾಲಯವಾಗಿ ಖ್ಯಾತಿ ಪಡೆದುಕೊಂಡಿದೆ. ಶಬರಿಮಲೆಗೆ ತೆರಳುವ ಭಕ್ತರು 41 ದಿನಗಳ ಕಡ್ಡಾಯ ವೃತವನ್ನು ಪಾಲಿಸಬೇಕು ಎಂಬುದಾಗಿದೆ. ನವೆಂಬರ್‌ನಿಂದ ಜನವರಿವರೆಗೂ ಮೂರು ತಿಂಗಳ ಕಾಲ ದೇವಾಲಯದಲ್ಲಿ ವಾರ್ಷಿಕ ಪೂಜಾ ಕಾರ್ಯ ಆರಂಭವಾಗುತ್ತದೆ. ವೃತ ಕೈಗೊಂಡು ಮಾಲೆ ಹಾಕಿದ ಅಯ್ಯಪ್ಪ ಭಕ್ತರು (Ayyappa Devotees) ನವೆಂಬರ್ ತಿಂಗಳಿನಿಂದ ಜನವರಿವರೆಗೆ ವಾರ್ಷಿಕ ಪ್ರವೇಶದ ಸಮಯದಲ್ಲಿ ಅಯ್ಯಪ್ಪ ಸ್ವಾಮಿಯ (Ayyappa Swamy) ದರ್ಶನವನ್ನು ಮಾಡುತ್ತಾರೆ. ಸ್ವಾಮಿ ದರ್ಶನದೊಂದಿಗೆ ದೇವಾಲಯದಲ್ಲಿ ಮಾರಾಟ ಮಾಡುವ ‘ಅರವಣ ಪಾಯಸಂ’ (aravana payasam) ಅನ್ನು ಭಕ್ತರು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ. ಆದರೆ ಇದೀಗ ಈ ಪ್ರಸಿದ್ಧ ಪಾಯಸ ಪ್ರಸಾದಕ್ಕೆ ಕಂಟಕ ಬಂದಿದೆ!ಪಾಯಸಕ್ಕೆ ಬಳಸುವ ಏಲಕ್ಕಿಯಲ್ಲಿ ವಿಷದ ಅಂಶ ಪತ್ತೆಇದೀಗ ಈ ವಿಶೇಷ ಅರವಣ ಪಾಯಸಂ ತಯಾರಿಸಲು ಬಳಸಿರುವ ಏಲಕ್ಕಿಯಲ್ಲಿ ಮಾರಕ ಕೀಟನಾಶಕದ ಉಳಿಕೆ ಪತ್ತೆಯಾಗಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಕೇರಳ ಹೈಕೋರ್ಟ್ ಶಬರಿಮಲೆಯಲ್ಲಿ ಅರವಣ ಪಾಯಸಂ ಮಾರಾಟಕ್ಕೆ ನಿರ್ಬಂಧ ವಿಧಿ
ಸಿದೆ ಅಯ್ಯಪ್ಪಸ್ವಾಮಿ (ಚಿತ್ರ ಕೃಪೆ: www.godwallpaper.in)
ಪ್ರಸಾದ ವಿತರಿಸದಂತೆ ನಿರ್ಬಂಧ ಹೇರಿರುವ ನ್ಯಾಯಾಲಯಪ್ರಸ್ತುತ ದೇವಾಲಯದಲ್ಲಿರುವ ಅರವಣ ಪಾಯಸಂ ಪ್ರಸಾದಕ್ಕೆ ಸೀಲು ಲಗತ್ತಿಸುವಂತೆ ಹೈಕೋರ್ಟ್, ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಏಲಕ್ಕಿ ಬಳಸದೇ ಅರವಣ ಪ್ರಸಾದದವನ್ನು ತಯಾರಿಸಿ ಮಾರಾಟ ಮಾಡುವಂತೆ ನ್ಯಾಯಾಲಯ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಗೆ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಅನಿಲ್ ಕೆ.ನರೇಂದ್ರನ್ ಮತ್ತು ಪಿ.ಜಿ.ಅಜಿತ್ಕುಮಾರ್ ಅವರಿದ್ದ ಕೇರಳ ಹೈಕೋರ್ಟ್ನ ವಿಭಾಗೀಯ ನ್ಯಾಯಪೀಠವು ಆದೇಶದ ಪ್ರತಿಗಾಗಿ ಕಾಯುವ ಅಗತ್ಯವಿಲ್ಲ, ತಕ್ಷಣದಿಂದ ಜಾರಿಗೆ ಬರುವಂತೆ ಪ್ರಸಾದ ವಿತರಣೆ ನಿಲ್ಲಿಸಬೇಕು ಎಂದು ಸೂಚಿಸಿ
ದೆ.ಅರವಣ ಪಾಯಸಂ ಪ್ರಸಾದ
ಇದನ್ನೂ ಓದಿ: Sabarimala: ಅಯ್ಯಪ್ಪ ಶಬರಿಮಲೆಯಲ್ಲೇ ಯಾಕೆ ನೆಲೆಸಿದ? ಮಣಿಕಂಠನ ಕುರಿತು ಕುತೂಹಲಕಾರಿ ಕಹಾನಿ ಇಲ್ಲಿದೆಅರ್ಜಿ ಸಲ್ಲಿಸಿದ್ದು ಯಾರು?ಇಡುಕ್ಕಿ ಮೂಲದ ‘ಅಯ್ಯಪ್ಪ ಸ್ಪೈಸಸ್’ ಎಂಬ ಸಂಸ್ಥೆಯು ಈ ಸಂಬಂಧ ವಕೀಲ ವಿ. ಸೇತುನಾಥ್ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೇ ಅರ್ಜಿದಾರರು ಕಳೆದ ವರ್ಷದ ‘ಮಂಡಳ-ಮಕರವಿಳಕ್ಕು’ ಹಬ್ಬದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಏಲಕ್ಕಿ ಸರಬರಾಜು
ಮಾಡಿತ್ತು ಅಯ್ಯಪ್ಪ ಸ್ವಾಮಿ ದೇಗುಲ
ಏಲಕ್ಕಿಯಲ್ಲಿ 14 ಕೀಟನಾಶಕಗಳ ಪತ್ತೆಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ವರದಿಯಲ್ಲಿ ಕೀಟನಾಶಕಗಳ ಉಪಸ್ಥಿತಿಯನ್ನು ಉಲ್ಲೇಖಿಸಲಾಗಿದೆ. ಕೇಂದ್ರೀಯ ಆಹಾರ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಏಲಕ್ಕಿಯಲ್ಲಿ 14 ಕೀಟನಾಶಕಗಳು ಅಧಿಕ ಪ್ರಮಾಣದಲ್ಲಿ ಕಂಡುಬಂದಿವೆ. ಈ ಕೀಟನಾಶಕಗಳು ಮಾನವ ದೇಹದ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ತಜ್ಞರು ತಿಳಿಸಿದ್ದಾರೆ.ಕೇರಳ ಹೈಕೋರ್ಟ್ಏಲಕ್ಕಿಯಲ್ಲಿ ಅಪಾಯಕಾರಿ ಅಂಶ ಪತ್ತೆಅಪಾಯಕಾರಿ ಮಟ್ಟದಲ್ಲಿ ಕೀಟನಾಶಕದ ಬಳಕೆಯಾಗಿರುವ ಏಲಕ್ಕಿ ಬಳಸಿ ಸಿದ್ಧಪಡಿಸಿದ ಪ್ರಸಾದವನ್ನು ಭಕ್ತರಿಗೆ ನೀಡುವಂತಿಲ್ಲ. ಈ ಆದೇಶ ಪಾಲನೆಯನ್ನು ಜಾರಿಗೆ ಬರುವಂತೆ ರೂಪಿಸುವ ಜವಾಬ್ದಾರಿ ಆಹಾರ ಸುರಕ್ಷಾ ಆಯುಕ್ತರದು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಯೋಗಾಲಯದ ವರದಿಯ ಪ್ರಕಾರ, ಈ ಏಲಕ್ಕಿಯಲ್ಲಿ 14 ಕೀಟನಾಶಕಗಳ ಉಳಿಕೆ ಪ್ರಮಾಣವು ಗರಿಷ್ಠ ಮಿತಿಯನ್ನು ಮೀರಿದೆ (Maximum Residue Limit – MRL). ಡಿತಿಯೊಕಾರ್ಬಮೇಟ್ಸ್, ಸೈಪರ್ಮೆತರಿನ್, ಇಮಿಡಾಕ್ಲೊಪ್ರಿಡ್ ರಾಸಾಯನಿಕಗಳ ಪ್ರಮಾಣ ಗಣನೀಯ ಮಟ್ಟದಲ್ಲಿದೆ.6 ಟನ್ ಪ್ರಸಾದ ಇರುವುದಾಗಿ ದೇವಾಲಯದ ಹೇಳಿಕೆದೇವಾಲಯದಲ್ಲಿ 6 ಟನ್ ಪ್ರಸಾದ ದಾಸ್ತಾನು ರಾಸಾಯನಿಕ ಯುಕ್ತ ಏಲಕ್ಕಿಗಳನ್ನು ಬಳಸಿ ಅರವಣ ಪ್ರಸಾದವನ್ನು ತಯಾರಿಸಿದೆಯೇ ಎಂದು ನ್ಯಾಯಾಲಯ ದೇವಾಲಯ ಸಮಿತಿಯನ್ನು ಪ್ರಶ್ನಿಸಿತ್ತು. ಪ್ರಸ್ತುತ ದೇವಾಲಯದಲ್ಲಿ ಆರು ಟನ್‌ಗಳಷ್ಟು ಅರವಣ ಪಾಯಸಂನ ದಾಸ್ತಾನು ಇರುವುದಾಗಿ ದೇವಾಲಯ ಕೋರ್ಟ್‌ಗೆ ತಿಳಿಸಿದೆ.ಇದನ್ನೂ ಓದಿ: Ayyappa Swamy: ಅಯ್ಯಪ್ಪ ಮಾಲಾಧಾರಿಗಳು ಕಪ್ಪು ಬಟ್ಟೆ ಧರಿಸೋದೇಕೆ? ಶನಿಗೂ ಇದಕ್ಕೂ ಇರೋ ಸಂಬಂಧವೇನು?ಪ್ರಸಾದಕ್ಕೆ ಕೋರ್ಟ್‌ನಿಂದ ಸೀಲ್ಪ್ರಸ್ತುತ ದಾಸ್ತಾನಿರುವ ಪ್ರಸಾದವನ್ನು ಭಕ್ತರಿಗೆ ನೀಡದಂತೆ ದೇವಾಲಯಕ್ಕೆ ನ್ಯಾಯಾಲಯ ನಿರ್ದೇಶನವನ್ನು ನೀಡಿದ್ದು, ಆಹಾರ ಹಾಗೂ ಸುರಕ್ಷತಾ ಇಲಾಖೆಗೆ ಈ ಪ್ರಸಾದಗಳಿಗೆ ಸೀಲು ಲಗತ್ತಿಸಿ ನಿರ್ಬಂಧಿಸುವಂತೆ ತಿಳಿಸಿದೆ. ನ್ಯಾಯಾಲಯದ ನಿಷೇಧವು ಮಂಡಳಿಗೆ ಇರಿಸು ಮುರಿಸನ್ನುಂಟು ಮಾಡಿದ್ದು ನಿಜವಾಗಿದೆ ಎಂಬುದು ವರದಿಗಳಿಂದ ತಿಳಿದುಬಂದಿದೆ. ಗುರುವಾರದಿಂದ ಭಕ್ತರಿಗೆ ಏಲಕ್ಕಿ ರಹಿತ ಅರವಣ ಪ್ರಸಾದವನ್ನು ವಿತರಿಸಲಾಗಿದೆ ಎಂಬುದು ವರದಿಯಾಗಿದೆ
Post a Comment