ಸಾಂದರ್ಭಿಕ ಚಿತ್ರ (ಕೃಪೆ: Internet)
2018ರ ನವೆಂಬರ್‌ವರೆಗೆ ಸುಮಾರು 5 ವರ್ಷಗಳಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆ ಒಟ್ಟೂ 6 ಸಾವಿರ ಕೊಲೆಗಳು ನಡೆದಿವೆಯಂತೆ. ಈ ಪೈಕಿ ಶೇಕಡಾ 3.3ರಷ್ಟು ಕೊಲೆಗಳು ನಡೆದಿರುವುದು ಲವ್ ಫೆಲ್ಯೂರ್ (Love Failure) ಹಾಗೂ ಪ್ರೀತಿಯ (Love) ಕಾರಣಕ್ಕಂತೆ!ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ (Karnataka State) ಕಾನೂನು ಸುವ್ಯವಸ್ಥೆ (Law and Order) ಹದಗೆಟ್ಟಿದೆ ಅಂತ ವಿರೋಧ ಪಕ್ಷಗಳು (Opposition Party) ಆಗಾಗ ಆರೋಪ ಮಾಡುತ್ತಲೇ ಇರುತ್ತವೆ. ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ದಿನ ನಿತ್ಯ ಅಪರಾಧ ಚಟುವಟಿಕೆಗಳು (Crime Activities) ನಡೆಯುತ್ತಿರುವುದು ಬೆಳಕಿಗೆ ಬರುತ್ತವೇ ಇವೆ. ಕೊಲೆ, ಅತ್ಯಾಚಾರ, ಕಳ್ಳತನ, ದರೋಡೆ, ಬೆದರಿಕೆ, ಆಸ್ತಿ ಗಲಾಟೆ, ಹೊಡೆದಾಟ ಇತ್ಯಾದಿ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಇನ್ನು ಈ ಬಗ್ಗೆ ಶಾಕಿಂಗ್ ವರದಿಯೊಂದು (Shocking Report) ಹೊರಬಿದ್ದಿದೆ. 2018ರ ನವೆಂಬರ್‌ವರೆಗೆ ಸುಮಾರು 5 ವರ್ಷಗಳಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆ ಒಟ್ಟೂ 6 ಸಾವಿರ ಕೊಲೆಗಳು ನಡೆದಿವೆಯಂತೆ. ಈ ಪೈಕಿ ಶೇಕಡಾ 3.3ರಷ್ಟು ಕೊಲೆಗಳು ನಡೆದಿರುವುದು ಲವ್ ಫೆಲ್ಯೂರ್ (Love Failure) ಹಾಗೂ ಪ್ರೀತಿಯ (Love) ಕಾರಣಕ್ಕಂತೆ!ಕಾಲೇಜ್‌ನಲ್ಲೇ ವಿದ್ಯಾರ್ಥಿಯನ್ನು ಕೊಂದಿದ್ದ ಯುವಕ ಇತ್ತೀಚಿಗಷ್ಟೇ ಯಲಹಂಕದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಿಯಕರನೊಬ್ಬ ವಿದ್ಯಾರ್ಥಿನಿಯೊಬ್ಬಳನ್ನು ಕೊಂದಿದ್ದ. ಜನವರಿ 2ರಂದು ಪ್ರೆಸಿಡೆನ್ಸಿ ಕಾಲೇಜ್‌ನ ಬಿಟೆಕ್ ವಿದ್ಯಾರ್ಥಿನಿ ಲಯಸ್ಮಿತಾ ಎಂಬಾಕೆಯನ್ನು ಆಕೆಯ ಸಂಬಂಧಿ ಪವನ್ ಕಲ್ಯಾಣ್ ಎಂಬಾತ ಚಾಕು ಹಾಕಿ ಕೊಲೆ ಮಾಡಿದ್ದ. ಬಳಿಕ ತಾನೂ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇಂತಹ ಘಟನೆ ನಡೆದಿದ್ದು ಬರೀ ಒಂದೆರಡಲ್ಲ ಅಂತಿದೆ ಈ ರಿಪೋ
ರ್ಟ್‌ಲಯಸ್ಮಿತಾ-ಪವನ್ ಕಲ್ಯಾಣ್
5 ವರ್ಷಗಳಲ್ಲಿ ನಡೆದಿದ್ದು 6551 ಕೊಲೆಗಳು!ಪೊಲೀಸ್ ಮೂಲಗಳ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ 2018 ರಿಂದ ನವೆಂಬರ್ 30, 2022 ರವರೆಗೆ 6,551 ಕೊಲೆಗಳು ನಡೆದಿರುವುದು ವರದಿಯಾಗಿವೆ. ಈ ಪೈಕಿ ಪ್ರೇಮ ಸಂಬಂಧಗಳು, ಲವ್ ಫೆಲ್ಯೂರ್‌ಗಳಿಂದ ನಡೆದ ಹತ್ಯೆಗಳ ಪ್ರಮಾಣ ಶೇಕಡಾ 3.3ರಷ್ಟು ಅಂದರೆ 215 ರಷ್ಟಿದೆ. ಈ ಐದು ವರ್ಷಗಳಲ್ಲಿ, ಒಟ್ಟು ಹತ್ಯೆಗಳಲ್ಲಿ 0.1% ರಿಂದ 4.5% ರಷ್ಟು ಮಾತ್ರ ಪ್ರೀತಿ ಕಾರಣಕ್ಕೆ ನಡೆದಿವೆಯಂ
ತೆ.ಸಾಂದರ್ಭಿಕ ಚಿತ್ರ
ಇದನ್ನೂ ಓದಿ: Bajrang Dal: ನೇತ್ರಾವತಿ ನದಿಯಲ್ಲಿ ಭಜರಂಗದಳ ಕಾರ್ಯಕರ್ತನ ಶವ ಪತ್ತೆ! ಕೊಲೆಯೋ, ಆತ್ಮಹತ್ಯೆಯೋ?ಪ್ರೇಮ ಹತ್ಯೆಗಳಿಗೆ ಕಾರಣಗಳೇನು?ಸಾಮಾನ್ಯವಾಗಿ ಪ್ರೇಮ ಸಂಬಂಧ ತಿರಸ್ಕಾರ ಈ ರೀತಿಯ ಕೊಲೆಗೆ ಕಾರಣವಾಗಿರುತ್ತದೆ. ಇದರ ಜೊತೆಗೆ ದಾಂಪತ್ಯ ದ್ರೋಹದ ಅನುಮಾನ ಮತ್ತು ಅಸೂಯೆ ಇಂತಹ ಕೊಲೆಗಳಿಗೆ ಕಾರಣವಾಗುವ ಇತರ ಅಂಶಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕ್ರಮಣಶೀಲತೆ ಮತ್ತು ಬಲವಂತದ ನಿಯಂತ್ರಣ ಮನೋಭಾವವು ಇಂತಹ ಹೇಯ ಕೃತ್ಯಗಳ ಹಿಂದಿನ ಪ್ರಮುಖ ಕಾರಣಗಳಾಗಿವೆ ಎಂದು ಮನೋವೈದ್ಯರು ಹೇಳುತ್ತಾರೆ ಅಂತ ಟೈಮ್ಸ್ ಆಫ್ ಇಂಡಿಯಾ ವರ
ದಿ ಮಾಡಿದೆಸಾಂದರ್ಭಿಕ ಚಿತ್ರಇದನ್ನೂ ಓದಿ: Hassan: ವಿಧಿ ಆಟ ಎಂತ ಘೋರ; ಅಂದು ಅಣ್ಣ-ಇಂದು ತಮ್ಮ, ಸಹೋದರನ ವರ್ಷದ ತಿಥಿಗೆ ಬರ್ತಿದ್ದ ತಮ್ಮ ಸಾವುಪ್ರೀತಿ ನಿರಾಕರಣೆ ವಿಚಾರದಲ್ಲಿ ಕೊಲೆಸ್ಪಂದನ ಹೆಲ್ತ್‌ಕೇರ್‌ನ ಮನೋವೈದ್ಯ ಮಹೇಶ್ ಗೌಡ ಮಾತನಾಡಿ, ಆಕ್ರಮಣಶೀಲತೆ ಮತ್ತು ಉದ್ವೇಗವು ಇಂತಹ ಹತ್ಯೆಗಳ ಹಿಂದೆ ಪ್ರಮುಖ ಪ್ರಚೋದಕ ಅಂಶಗಳಾಗಿವೆಯಂತೆ. ಕೆಲವು ವ್ಯಕ್ತಿಗಳು ಪ್ರೇಮ ಅಥವಾ ಮದುವೆಯಂತ ಸಂಬಂಧಗಳಲ್ಲಿ ನಿರ್ಲಕ್ಷ್ಯ ಅಥವಾ ಪ್ರೀತಿ ನಿರಾಕರಣೆಯನ್ನು ಸಹಿಸಿಕೊಳ್ಳುವುದಿಲ್ಲ. ಹೀಗಾಗಿಯೇ ಈ ರೀತಿಯ ಕೊಲೆಗಳು ನಡೆಯುತ್ತವೆ ಅಂತ ಅವರು ಹೇಳಿದ್ದಾಗಿ ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.
Post a Comment