NATIONAL YOUTH DAY 2023: ರನ್​ವೇ ರೆಡಿ ಇದೇ, ನೀವು ಟೇಕಾಫ್​ ಆಗೋದು ಅಷ್ಟೇ ಬಾಕಿ; ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ


  ಪ್ರಧಾನಿ ನರೇಂದ್ರ ಮೋದಿ

 ಯುವಜನೋತ್ಸವದಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪಂಡಿತ್ ಕುಮಾರ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್ ಮೊದಲಾದ ಕಲಾಪ್ರತಿಭೆಗಳ ನಾಡು ಇದಾಗಿದೆ. ರಾಣಿ ಚೆನಮ್ಮ ನಾಡು, ಸಂಗೋಳಿ ರಾಯಣ್ಣ ಬಿಡು. ಎಲ್ಲಾ ಗಣ್ಯರಿಗೂ ನಮನ ಸಲ್ಲಿಸ್ತೇನೆ. ಈ ಪುಣ್ಯ ಭೂಮಿಗೆ ನನ್ನ ನಮಸ್ಕಾರಗಳು ಎಂದು ತಿಳಿಸಿದರು.ಹುಬ್ಬಳ್ಳಿ: ಯುವಜನೋತ್ಸವದಲ್ಲಿ (National Youth Festival 2023) ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು, ಪಂಡಿತ್ ಕುಮಾರ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್ ಮೊದಲಾದ ಕಲಾಪ್ರತಿಭೆಗಳ ನಾಡು ಇದಾಗಿದೆ. ರಾಣಿ ಚೆನಮ್ಮ ನಾಡು, ಸಂಗೋಳಿ ರಾಯಣ್ಣ ಬಿಡು. ಎಲ್ಲಾ ಗಣ್ಯರಿಗೂ ನಮನ ಸಲ್ಲಿಸ್ತೇನೆ. ಈ ಪುಣ್ಯ ಭೂಮಿಗೆ ನನ್ನ ನಮಸ್ಕಾರಗಳು ಎಂದು ತಿಳಿಸಿದರು.ಈ ಪುಣ್ಯ ಭೂಮಿಗೆ ನನ್ನ ನಮಸ್ಕಾರಗಳುಕರ್ನಾಟಕದ ಹಲವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಕರ್ನಾಟಕ ಹಲವು ಮಠಗಳಿಗೆ ನನ್ನ ನಮನಗಳು. ರಾಷ್ಟ್ರೀಯ ಯುವ ದಿನ ಬಹಳ ವಿಶೇಷವಾಗಿದೆ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಸ್ವಾಮಿ ವಿವೇಕಾನಂದರವರು ಹೇಳಿದ್ದರು. ಭಾರತರ ಯುವಕರ ಮೇಲೆ ಸ್ವಾಮಿ ವಿವೇಕಾನಂದರ ಪ್ರೇರಣೆ ಇದ್ದು, ವಿವೇಕಾನಂದ ಚರಣಕ್ಕೆ ನಾನು ನಮಿಸುತ್ತೇನೆ. ಕೆಲ ದಿನಗಳ ಹಿಂದೆ ಈ ಮಣ್ಣನಲ್ಲಿ ಮತ್ತೊಬ್ಬ ಸಂತರಾದ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕರಾದರು, ನಾನು ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದೇನೆ.ಮೈಸೂರು ಮಹಾರಾಜರು ಕೂಡ ವಿವೇಕಾನಂದರ ಶಿಕಾಗೋ ಯಾತ್ರೆಗೆ ನೆರವು ನೀಡಿದ್ದಾರೆ. ಕರ್ನಾಟಕದೊಂದಿಗೆ ವಿವೇಕಾನಂದರಿಗೆ ನಂಟಿತ್ತು. ಬೆಂಗಳೂರು, ಹುಬ್ಬಳ್ಳಿ, ಧಾರವಾಡಕ್ಕೂ ಬಂದಿದ್ದರು. ಚಿಕ್ಕ ವಯಸ್ಸಿನಲ್ಲೇ ವಿವೇಕಾನಂದರು ಅಪಾರ ಸಾಧನೆ ಮಾಡಿದ್ದರುಏಕ್ ಭಾರತ್, ಶ್ರೇಷ್ಠ ಭಾರತ್ ನಮ್ಮ ಸಂಕಲ್ಪ. ಭಾರತ ಯುವ ದೇಶವಾಗಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಯುವ ಶಕ್ತಿ ನಮ್ಮ ದೇಶದಲ್ಲಿದ್ದು, ತರಬೇತಿ ಪಡೆದ ಯುವಕರಿದ್ದಾರೆ. ಮುಂದಿನ 25 ವರ್ಷಗಳು ಭಾರತ ನಿರ್ಮಿಸಲು ಪ್ರಮುಖವಾಗಿದೆ. ಯುವ ಜನತೆಯ ಫ್ಯಾಷನ್​ ಭಾರತ ಭವಿಷ್ಯವನ್ನ ನಿರ್ಧರಿಸುತ್ತದೆ. ನಾವು ನಮ್ಮ ಯೋಚನೆ, ಕೆಲಸಗಳಲ್ಲಿ ಯುವಕರಾಗಿರಬೇಕು. ದೇಶವನ್ನು ಮುನ್ನಡೆಸುವುದು ಯುವಕರ ಕರ್ತವ್ಯ. ದೇಶದ ಅಭಿವೃದ್ಧಿಯಲ್ಲಿ, ರಕ್ಷಣೆಯಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಯುವ ಶಕ್ತಿಯೇ ಭಾರತ ದಿಕ್ಕನ್ನು, ಲಕ್ಷ್ಯವನ್ನು ನಿರ್ಧರಿಸುತ್ತದೆ. ಜಗತ್ತಿನ 5ನೇ ದೊಡ್ಡ ಅರ್ಥ ವ್ಯವಸ್ಥೆ ಹೊಂದಿರುವ ರಾಷ್ಟ್ರ ನಮ್ಮದು. ಜಗತ್ತು ಭಾರತವನ್ನು ಬೆರಗು ಕಣ್ಣಿನಿಂದ ನೋಡುತ್ತಿದೆ. ನಮ್ಮ ಗುರಿ ವಿಶ್ವದ ಮೂರನೇ ಸ್ಥಾನಕ್ಕೆ ಕರೆದ್ಯೊಯುವುದಾಗಿದೆ.ನಿಮ್ಮ ಟೇಕ್​ ಆಫ್​​ಗೆ ರನ್​ವೇ ಸಿದ್ಧವಾಗಿದೆ. ಇದು ನಿಮ್ಮ ಶತಮಾನ, ಭಾರತದ ಶತಮಾನ ನಿಮಗಾಗಿಯೇ ಇದೆ. ನಿಮ್ಮ ಕಾರ್ಯಕ್ಷಮತೆಯಿಂದ ವಿಶ್ವ ಮಟ್ಟದಲ್ಲಿ ಭಾರತ ಮಿಂಚಲಿದೆ. ಉದ್ಯಮಿಗಳು ನಿಮ್ಮ ಮೇಲೆ ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆ. ಇದೊಂದು ಐತಿಹಾಸಿಕ ಸಮಯ, ನಮ್ಮ ದೇಶದಲ್ಲಿ ನಾರಿ ಶಕ್ತಿ, ರಾಷ್ಟ್ರಶಕ್ತಿಯನ್ನು ಜಾಗತಿ ಮಾಡುತ್ತಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಮಹತ್ವದ ಎತ್ತರಗಳನ್ನು ಏರುತ್ತಿದ್ದಾರೆ. 21ನೇ ಶತಮಾವನ್ನು ಭಾರತ ಶತಮಾನವಾಗಿ ರೂಪಿಸೋಣ. ವಿಶ್ವದ ಆಧುನಿಕ ದೇಶಗಳಿಂದ ನಾವು ಮುಂದೆ ಹೋಗಬೇಕಿದೆ. ಇದಕ್ಕಾಗಿ 10 ಹೆಜ್ಜೆ ಮುಂದೆ ಹೋಗಿ ಯೋಚನೆ ಮಾಡ್ಬೇಕಿದೆ. ಶಿಕ್ಷಣದಿಂದ ಸುರಕ್ಷತೆ, ಆರೋಗ್ಯದಿಂದ ಸಂಪರ್ಕದವರೆಗೂ ಎಲ್ಲವೂ ತಂತ್ರಜ್ಞಾನದ ಮೂಲಕ ಬರಲಿದೆ. ನಮ್ಮ ಯುವ ಜನತೆ ಭವಿಷ್ಯದ ಕೌಶಲ್ಯತೆಗಳನ್ನು ಕಲಿಯಬೇಕಿದೆ. ಯಾವ ಕೆಲಸಗಳನ್ನು ಯಾರು ಮಾಡುತ್ತಿಲ್ಲವೋ ಅಂತಹ ಕೆಲಸಗಳನ್ನು ನಾವು ಮಾಡ್ಬೇಕು. ಇದಕ್ಕಾಗಿ ನಾವು ಹೊಸ ಶಿಕ್ಷಣ ನೀತಿಯನ್ನು ಸಿದ್ಧಪಡಿಸಿದ್ದೇವೆ.ಇದನ್ನೂ ಓದಿ: NATIONAL YOUTH DAY 2023: ಪ್ರಧಾನಿ ಮೋದಿ ರೋಡ್​ ಶೋ ವೇಳೆ ಭದ್ರತಾ ಲೋಪ; ಪ್ರಧಾನಿಗೆ ಹಾರ ಹಾಕಲು ಬ್ಯಾರಿಕೇಟ್​ ದಾಟಿದ ಬಾಲಕವಿವೇಕಾನಂದರ ಎರಡು ಸಂದೇಗಳು ಪ್ರತಿಯೊಬ್ಬರ ಬದುಕಿನ ಭಾಗವಾಗಬೇಕು. ಭವಿಷ್ಯಕ್ಕೆ ಸನ್ನದ್ಧಗೊಂಡಿರುವ ಯುವಕರನ್ನು ಸಿದ್ಧಗೊಳಿಸುವ ಕೆಲಸವನ್ನ ಮಾಡುತ್ತಿದ್ದೇವೆ. ಮೊದಲು ಆನ್​ಲೈನ್​ ಪೇ ಭಾರತದಲ್ಲಿ ಆಗೋದಿಲ್ಲ ಅಂದಿದ್ದರು. ಅಲ್ಲದೇ ಸ್ವಚ್ಛ ಭಾರತ್ ಅಭಿಯಾನದ ಬಗ್ಗೆ ವ್ಯಂಗ್ಯವಾಡಿದ್ದರು.ಇಂತಹ ಅನೇಕ ಕೆಲಸಗಳ ಬಗ್ಗೆ ಹಲವರು ಅಪಹಾಸ್ಯ ಮಾಡಿದವರಿಗೆ ಯುವಕರು ತಕ್ಕ ಉತ್ತರ ನೀಡಿದ್ದಾರೆ. ಸಾಧನೆ ಮಾಡಲು ಯುವಕರಿಗೆ ಇದು ಉತ್ತಮ ಸಮಯ. ನಿಮ್ಮ ಬಳಿ ಹೊಸ ಯೋಜನೆಗಳಿದ್ದರೇ, ನೀವು ಅಪಹಾಸ್ಯಕ್ಕೆ ಒಳಗಾಗಬಹುದು. ಆದರೆ ಅದುವೇ ಮುಂದಿನ ದಿನಗಳಲ್ಲಿ ನಿಮ್ಮ ಶಕ್ತಿ ಆಗಲಿದೆ. ಈಗ ಭಾರತ ಕೊರೊನಾ ವಾಕ್ಸಿನ್ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿದೆ.

Post a Comment

Previous Post Next Post