Traffic Police Kidnap: ರೋಡ್​​ನಲ್ಲಿ ಪ್ರಶ್ನಿಸಿದ ಟ್ರಾಫಿಕ್ ಪೊಲೀಸ್​ಗೆ ಥಳಿತ, ಕಾರಿನಲ್ಲಿ ಎತ್ತಾಕೊಂಡ್ ಹೋದ ಕಿಡಿಗೇಡಿ!


 ಸಾಂದರ್ಭಿಕ ಚಿತ್ರ

ಪೊಲೀಸರ ಪ್ರಕಾರ ಬಸ್​ ನಿಲ್ದಾಣದ ಬಳಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿ ನಿರಂತರವಾಗಿ ಹಾರ್ನ್​ ಮಾಡಿದ್ದಾನೆ. ಇದರಿಂದ ಸ್ಥಳದಲ್ಲಿದ್ದ ಅನೇಕ ಮಂದಿಗೆ ಕಿರಿಕಿರಿ ಉಂಟಾಗಿತ್ತು. ಜೋರಾಗಿ ಹಾರ್ನ್​​ ಮಾಡಿದ್ದಲ್ಲದೇ ವ್ಯಕ್ತಿ ಅನೇಕ ಬಾರಿ ಟ್ರಾಫಿಕ್​ ರೂಲ್ಸ್ ಅನ್ನು ಬ್ರೇಕ್​ಕೂಡ ಮಾಡಿದ್ದಾನೆ. ಹೀಗಾಗಿ ಪೊಲೀಸರು ಆತನನ್ನು ತಡೆದು ಠಾಣೆಗೆ ಬರುವಂತೆ ಹೇಳಿದ್ದಾರೆ.ಭೋಪಾಲ್: ಜನರನ್ನು ರಕ್ಷಿಸುವ ಸಲುವಾಗಿ ಟ್ರಾಫಿಕ್ ನಿಯಮಗಳನ್ನು (Traffic Rules) ಜಾರಿಗೆ ತರಲಾಗಿರುತ್ತದೆ. ಅಪಘಾತ, ವೇಗ ಸಂಚಾರ ಹೀಗೆ ಅನೇಕ ಅಪಾಯಗಳನ್ನು ತಪ್ಪಿಸುವ ಸಲುವಾಗಿ ರಸ್ತೆಯಲ್ಲಿ ಟ್ರಾಫಿಕ್ ದೀಪ, ಹಮ್ಸ್, ಡಿವೈಡರ್​ ಹೀಗೆ ಹಲವು ಮಾರ್ಗಗಳನ್ನು ಅಳವಡಿಸಲಾಗಿರುತ್ತದೆ. ಇದಲ್ಲದೇ ಯಾವುದೇ ಅನಾಹುತ ನಡೆಯಬಾರದು ಎಂದು ಟ್ರಾಫಿಕ್ ಪೊಲೀಸರನ್ನು (Traffic Police) ನಿಯೋಜಿಸಲಾಗಿರುತ್ತದೆ. ಆದರೆ ಇಲ್ಲೋರ್ವ ವ್ಯಕ್ತಿ ಟ್ರಾಫಿಕ್ ರೂಲ್ಸ್​ ಬ್ರೇಕ್ ಮಾಡಿದ್ದಕ್ಕೆ ವಾಹನ ತಡೆದಿದ್ದಕ್ಕೆ ಪೊಲೀಸ್​ ಅನ್ನೇ ಅಪಹರಿಸಿ (Kidnap) ಹಲ್ಲೆ ನಡೆಸಿದ್ದಾನೆ. ಹೌದು, ನಿರಂತರವಾಗಿ ಹಾರ್ನ್​ (Horn) ಬಾರಿಸಿದ್ದಕ್ಕೆ ವ್ಯಕ್ತಿಯೊರ್ವನ ಕಾರನ್ನು (Car) ಪೊಲೀಸ್ ತಡೆದಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಪೊಲೀಸ್​ನನ್ನೇ ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ (Madhya Pradesh) ಸಾಗರ್‌ನಲ್ಲಿ ನಡೆದಿದೆ.ಜೋರಾಗಿ ಹಾರ್ನ್​​ ಮಾಡಿದ್ದಲ್ಲದೇ ವ್ಯಕ್ತಿಯಿಂದ ಟ್ರಾಫಿಕ್ ರೂಲ್ಸ್​ ಬ್ರೇಕ್ಪೊಲೀಸರ ಪ್ರಕಾರ ಬಸ್​ ನಿಲ್ದಾಣದ ಬಳಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿ ನಿರಂತರವಾಗಿ ಹಾರ್ನ್​ ಮಾಡಿದ್ದಾನೆ. ಇದರಿಂದ ಸ್ಥಳದಲ್ಲಿದ್ದ ಅನೇಕ ಮಂದಿಗೆ ಕಿರಿಕಿರಿ ಉಂಟಾಗಿತ್ತು. ಜೋರಾಗಿ ಹಾರ್ನ್​​ ಮಾಡಿದ್ದಲ್ಲದೇ ವ್ಯಕ್ತಿ ಅನೇಕ ಬಾರಿ ಟ್ರಾಫಿಕ್​ ರೂಲ್ಸ್ ಅನ್ನು ಬ್ರೇಕ್​ಕೂಡ ಮಾಡಿದ್ದಾನೆ. ಹೀಗಾಗಿ ಪೊಲೀಸರು ಆತನನ್ನು ತಡೆದು ಠಾಣೆಗೆ ಬರುವಂತೆ ಹೇಳಿದ್ದಾ


ರೆ.ಸಾಂದರ್ಭಿಕ ಚಿತ್ರಬಲವಂತವಾಗಿ ಎಎಸ್ಐ ಅನ್ನು ಕಾರಿನಲ್ಲಿ ಕೂರಿಸಿಕೊಂಡ ವ್ಯಕ್ತಿಈ ವೇಳೆ ವ್ಯಕ್ತಿ ಬಲವಂತವಾಗಿ ಕಾರಿನಲ್ಲಿ ಎಎಸ್ಐ ರಾಮಲಾಲ್ ಅಹಿರ್ವಾರ್ ಅವರನ್ನು ಕೂರಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಗೌರ್ಜಾಮರ್ ಪೊಲೀಸ್ ಠಾಣೆಯ ಉಸ್ತುವಾರಿ ಬ್ರಿಜ್ಮೋಹನ್ ಕುಶ್ವಾಹಾ ಹೇಳಿದ್ದಾರೆ. ಹಲ್ಲೆ ನಡೆಸಿ ಪೊಲೀಸ್​ ಅನ್ನು ಕಾರಿನಿಂದ ಕೆಳಗೆ ದಬ್ಬಿದನಂತರ ಪೊಲೀಸರು ಕಾರಿನಲ್ಲಿ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂಬ ವಿಚಾರ ತಿಳಿದ ಆರೋಪಿ ಎಎಸ್‌ಐ ಅಧಿಕಾರಿನ್ನು ಬಳಿಕ ಕಾರಿನಿಂದ ಕೆಳಗೆ ತಳ್ಳಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಚಂದ್ರಹಾಸ್ ಎಂದು ಗುರುತಿಸಲಾಗಿದ್ದು, ಇದೀಗ ಆತನ ವಿರುದ್ಧ ಅಪಹರಣ, ಪೊಲೀಸರ ಅಧಿಕೃತ ಕೆಲಸಕ್ಕೆ ಅಡ್ಡಿಪಡಿಸುವುದು ಮತ್ತು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಬ್ರಿಜ್ಮೋಹನ್ ಕುಶ್ವಾಹಾ ಅವರು ತಿಳಿಸಿದ್ದಾರೆ. ಸದ್ಯ ಆರೋಪಿಯ ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು, ಆತನಿಗಾಗಿ ಹುಡುಕಾಟ ನಡೆಸುತ್ತಿ


ದ್ದಾರೆ ಸಾಂದರ್ಭಿಕ ಚಿತ್ರತಮ್ಮ ಪ್ರಾಣ ಲೆಕ್ಕಿಸದೇ ಪಕ್ಷಿ ಜೀವ ಉಳಿಸಿದ್ದ ಟ್ರಾಫಿಕ್ ಪೊಲೀಸ್​ಇತ್ತೀಚೆಗಷ್ಟೇ ಬೆಂಗಳೂರಿನ ಟ್ರಾಫಿಕ್‌ ಪೊಲೀಸರೊಬ್ಬರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಬೈಲ್​ ಟವರ್​ ಏರಿ ಪಕ್ಷಿ ಜೀವ ರಕ್ಷಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.The hidden and unexplored side of a policemen. Well done Mr Suresh from @rajajinagartrps pic.twitter.com/D9XwJ60Npz— Kuldeep Kumar R. Jain, IPS (@DCPTrWestBCP) December 30, 2022ಬೆಂಗಳೂರಿನ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯ ಸುರೇಶ್ ಎನ್ನುವವರು ಜೀವದ ಹಂಗು ತೊರೆದು ಮೊಬೈಲ್​ ಟವರ್‌ ಏರಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಪಕ್ಷಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದರು. ತಮ್ಮ ಪ್ರಾಣವನ್ನು ಲೆಕ್ಕಿಸದೇ, ಪಕ್ಷಿಯ ಪ್ರಾಣವನ್ನು ಉಳಿಸಿದ ಆರಕ್ಷಕನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತು.ವ್ಯಕ್ತಿ ಮೇಲೆ ಸಂಚಾರಿ ಪೊಲೀಸ್ ದಬ್ಬಾಳಿಕೆ ವೀಡಿಯೋಈ ಹಿಂದೆ ಬೆಂಗಳೂರಿನಲ್ಲಿ ಕಾರು ಚಾಲಕರೊಬ್ಬರು ಸಂಚಾರಿ ಪೊಲೀಸ್ ಸಿಬ್ಬಂದಿ ವರ್ತನೆ ವಿಡಿಯೋವನನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದರು.ಇದನ್ನೂ ಓದಿ:Viral Video: ಟ್ರಾಫಿಕ್ ಪೊಲೀಸ್ ನೆರವಿನಿಂದ ರಸ್ತೆ ದಾಟಿದ ನೀರುನಾಯಿಗಳು: ವಿಡಿಯೋ ನೋಡಿಬೆಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿ ಓರ್ವರು ಕಾರು ಚಾಲಕ ವಿನಯ್ ಎಂಬವರನ್ನು ನಿಂದಿಸಿದ್ದಾರೆ. ಅಧಿಕಾರದ ದರ್ಪದಿಂದ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಟ್ರಾಫಿಕ್ ಪೊಲೀಸರ ವರ್ತನೆಗೆ ಬೇಸತ್ತ ವಿನಯ್ ತಮ್ಮ ಮೊಬೈಲ್​ನಲ್ಲಿ ಪೊಲೀಸ್ ನಿಂದನೆ ವಿಡಿಯೋ ಸೆರೆಹಿಡಿದು ಬ್ಯಾಟರಾಯನಪುರ ಪೊಲೀಸರಿಗೆ ಟ್ಯಾಗ್ ಮಾಡಿ, ಬಿಸಿಪಿ ಸೋಷಿಯಲ್ ಮೀಡಿಯಾ ಟೀಂಗೂ ದೂರನ್ನು ಫಾರ್ವರ್ಡ್ ಮಾಡಿ ಆಕ್ರೋಶ ಹೊರ ಹಾಕಿದ್ದರು.

Post a Comment

Previous Post Next Post