HD Kumaraswamy: ಸಿಂದಗಿ ಕ್ಷೇತ್ರದ JDS ಅಭ್ಯರ್ಥಿಯಾಗಿ ದಿವಂಗತ ಶಿವಾನಂದ ಪಾಟೀಲ್ ಸೋಮಜಾಳ ಪತ್ನಿ ವಿಶಾಲಾಕ್ಷಿ ಕಣಕ್ಕೆ; ಹೆಚ್​ಡಿಕೆ


 ಹೆಚ್ಡಿ ಕುಮಾರಸ್ವಾಮಿ, ಮಾಜಿ ಸಿಎಂ

 ಶಿವಾನಂದ ಪಾಟೀಲ್ ಅವರು ಶಾಸಕರಾಗಿ ಜನರ ಸೇವೆ ಮಾಡ್ಬೇಕು ಎಂದು ಮಹತ್ವಕಾಂಕ್ಷೆ ಹೊಂದಿದ್ದರು. ಆದ್ದರಿಂದ ಅವರ ಕನಸನ್ನು ಸಹೋದರಿ ಮೂಲಕ ನನಸು ಮಾಡಲು ಮುಂದಾಗಿದ್ದೇವೆ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆವಿಜಯಪುರ: ಸಿಂಗದಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ದಿವಂಗತ ಶಿವಾನಂದ ಪಾಟೀಲ್ ಸೋಮಜಾಳ ಪತ್ನಿ ವಿಶಾಲಾಕ್ಷಿ ಅವರನ್ನು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ. ಸಿಂದಗಿಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಶಿವಾನಂದ ಪಾಟೀಲ್ ಸೋಮಜಾಳ ಪತ್ನಿ ವಿಶಾಲಾಕ್ಷಿ ಅವರಿಗೆ ಪಕ್ಷದ ಟಿಕೆಟ್ ನೀಡುತ್ತಿರುವುದಾಗಿ ಘೋಷಣೆ ಮಾಡಿದರು. ಚುನಾವಣೆಯಲ್ಲಿ ವಿಶಾಲಾಕ್ಷಿ ಅವರಿಗೆ ನಿಮ್ಮ ಮನೆಯ ಮಗಳೆಂದು, ತಂಗಿಯೆಂದು ಬೆಂಬಲಿಸಿ ಆಶೀರ್ವದಿಸಿ ಎಂದು ಮನವಿ ಮಾಡಿದರುಶಿವಾನಂದ ಪಾಟೀಲ್ ಸೋಮಜಾಳ ಪತ್ನಿ ವಿಶಾಲಾಕ್ಷಿಗೆ ಜೆಡಿಎಸ್ ಟಿಕೆಶಾಲಾಕ್ಷಿ ಅವರಿಗೆ ಎಷ್ಟೇ ನೋವಿದ್ದರು ಅವರು ಅದನ್ನು ಹೊರ ಹಾಕದೇ ನಮ್ಮ ಎದುರು ನಿಂತಿದ್ದಾರೆ. ಅವರಿಗೆ ರಾಜಕೀಯ ಗೊತ್ತಿಲ್ಲ. ಅವರಿಗೆ ರಾಜಕೀಯ ತಿಳುವಳಿಕೆ ಇಲ್ಲ. ಆದರೆ ಶಿವಾನಂದ ಪಾಟೀಲ್ ಅವರು ಶಾಸಕರಾಗಿ ಜನರ ಸೇವೆ ಮಾಡ್ಬೇಕು ಎಂದು ಮಹತ್ವಕಾಂಕ್ಷೆ ಹೊಂದಿದ್ದರು. ಆದ್ದರಿಂದ ಅವರ ಕನಸನ್ನು ಸಹೋದರಿ ಮೂಲಕ ನನಸು ಮಾಡಲು ಮುಂದಾಗಿದ್ದೇವೆ. ಅವರನ್ನು ಕಾಪಾಡುವುದು ನಿಮ್ಮ ಕರ್ತವ್ಯ, ಜವಾಬ್ದಾರಿ. ಸಿಂಗದಿ ಕ್ಷೇತ್ರದ ಜನರ ಮಡಿಲಿಗೆ ಈ ತಾಯಿಯನ್ನು ಇಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರುಇದನ್ನೂ ಓದಿ: HD Kumaraswamy: ದೇವೇಗೌಡ್ರು ಸಾಯುವ ಮುನ್ನ ಅವ್ರ ಪಕ್ಷ ಉಳಿತು ಅಂತ ಸಾಬೀತು ಮಾಡ್ಬೇಕು- ಮಾಜಿ ಸಿಎಂ ಹೆಚ್ಡಿಕೆ ಭಾವುರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದ್ದ ಜೆಡಿಎಸ್ ನಾಯಕರಿಗೆ ಸಿಂದಗಿ ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜಾಳ (54) ನಿಧನ ಬಿಗ್ಶಾಕ್ ನೀಡಿತ್ತು. ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಇಂದು ಕ್ಷೇತ್ರದಲ್ಲಿ ನಡೆಸಲಾಗಿತ್ತುಅಭ್ಯರ್ಥಿ ಘೋಷಣೆ ಬಳಿಕ ಮಾತನಾಡಿ ಹೆಚ್ಡಿಕೆ, ಸದ್ಯದ ರಾಜಕಾರಣದಲ್ಲಿ ಯಾರನ್ನೂ ನಂಬಲಾಗದ ದಿನಗಳನ್ನು ನಾನು ಕಂಡಿದ್ದೇನೆ. ಸಿಂದಗಿ ಕ್ಷೇತ್ರದ ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಎಚ್.ಡಿ.ದೇವೇಗೌಡರ ಸಂಬಂಧ ಅತ್ಯುತ್ತಮವಾಗಿತ್ತು. ಆದರೆ, ಅವರ ಮಕ್ಕಳಿಗೆ ಸಂಬಂಧ ಮುಖ್ಯವಾಗಿರದೆ ಅಧಿಕಾರ ಮುಖ್ಯವೆನಿಸಿ ಜೆಡಿಎಸ್ ಪಕ್ಷ ತೊರೆದು ಬೇರೆ ಪಕ್ಷ ಸೇರ್ಪಡೆಯಾದರು. ಅಧಿಕಾರಕ್ಕಾಗಿ ಮಾನವೀಯತೆ ಮರೆತರು ಎಂದು ಹೇಳಿದ


ರು. .ಕ.ಟ್..ದು ಹೇಳಿದರು ಹೆಚ್​ಡಿ ಕುಮಾರಸ್ವಾಮಿಇದನ್ನೂ ಓದಿ: HD Kumraswamy: 2028ಕ್ಕೆ ಜೆಡಿಎಸ್ ಪಕ್ಷ ವಿಸರ್ಜಿಸುತ್ತೇನೆ! ಹೀಗಂದಿದ್ದೇಕೆ ಎಚ್​ಡಿ ಕುಮಾರಸ್ವಾಮಿ?ಅಲ್ಲದೇ, ಸಿಂದಗಿ ಉಪಚುನಾವಣೆಯಲ್ಲಿ ದೇವೇಗೌಡರು 10 ದಿನಗಳ ಕಾಲ ಮತಯಾಚಿಸಿದ್ದರು. ಆದರೂ ಅಂದು ಜೆಡಿಎಸ್‌ಗೆ ಹಿನ್ನಡೆ ಆಯಿತು. ಈ ಭಾಗದಲ್ಲಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ತಂದ ದೇವೆಗೌಡರನ್ನೇ ಜನ ಮರೆತರು. ಅಂದಿನ ಚುನಾವಣೆ ಫಲಿತಾಂಶ ನಮಗೆ ದೊಡ್ಡ ಆಘಾತ ತರಿಸಿತು. ಕೇವಲ ಮೂರು ಸಾವಿರ ವೋಟ್​​ಗಳನ್ನು ಮಾತ್ರ ಜೆಡಿಎಸ್ ಅಭ್ಯರ್ಥಿ ಪಡೆದುಕೊಂಡಿದ್ದರು ಎಂದು ಬೇಸರ ವ್ಯಕ್ತಪಡಿಸಿದರು ಸ್ಮರಿಸಿದರು. ಅಲ್ಲದೇ ಆಡಳಿತ ರೂಢ ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಜೆಡಿಎಸ್​ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.ಜಮೀರ್ ಹೇಳಿಕೆಗೆ ರೇವಣ್ಣ ಪ್ರತಿಕ್ರಿಯೆಇಂದು ಹಾಸನದಲ್ಲಿ ಮಾತನಾಡಿದ್ದ ಹೆಚ್​ಡಿ ರೇವಣ್ಣ, ಜೆಡಿಎಸ್ ಗೆ ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ ಎಂಬ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ್ದರು. ರಾಷ್ಟ್ರದಲ್ಲಿ ಕಾಂಗ್ರೆಸ್ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಈಗಾಗಲೇ ಕನ್ಯಾಕುಮಾರಿಯಿಂದ ಕಾಂಗ್ರೆಸ್ ಬಸ್ ನಿಂತೋಗಿದೆ. ಎಷ್ಟು ರಾಜ್ಯದಲ್ಲಿದ್ದ ಕಾಂಗ್ರೆಸ್ ಇವತ್ತು ಏನಾಗಿದೆ. ಎ ಟೀಂ, ಬಿ ಟೀಂ ಅನ್ನೋದಾದ್ರೆ, ಒಬ್ಬ ಬಿಜೆಪಿಯ ಸಂಸದರು ಹೇಳ್ತಿದ್ದಾರೆ. ದೇವೇಗೌಡರು ಸೋಲಿಸಲು 83 ಸಾವಿರ ವೋಟು ಹಾಕಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ವೋಟು ಹಾಕಿ ಅಂತಾ ಬಿಜೆಪಿ ಸಂಸದರು ಹೇಳುತ್ತಿದ್ದಾರೆ ಎಂದು ಟೀಕೆ ಮಾಡಿದರು.

Post a Comment

Previous Post Next Post