ತಮಿಳು ಮಫ್ತಿ ಚಿತ್ರದ ಬಗ್ಗೆ ಮಧು ಏನು ಹೇಳ್ತಾರೆ?ಪತ್ತು ತಲಾ ಚಿತ್ರದಲ್ಲಿ ಕಥೆ ಏನೂ ಬದಲಾಗಿಲ್ಲ. ನರ್ತನ್ ಬರೆದ ಕಥೆಯನ್ನೆ ಇಟ್ಟುಕೊಂಡಿದ್ದಾರೆ. ಆದರೆ ಪತ್ತು ತಲಾ ಚಿತ್ರದ ಚಿತ್ರಕಥೆಯನ್ನ ಡೈರೆಕ್ಟರ್ ಒಬೆಲಿ ಎನ್ ಕೃಷ್ಣ ಸಂಪೂರ್ಣ ಬದಲಿಸಿದ್ದಾರೆ. ಬದಲಾದ ಚಿತ್ರಕಥೆಯೊಂದಿಗೆ ಕನ್ನಡದ ಮಫ್ತಿ ಅಲ್ಲಿ ರೆಡಿ ಆಗಿದೆ ಅಂತಲೇ ಮಧು ಗುರುಸ್ವಾಮಿ ತಿಳಿಸುತ್ತಾರೆ.ರೋರಿಂಗ್ ಸ್ಟಾರ್ ಶ್ರೀ ಮುರಳಿ (Sri Murali Movie) ಅಭಿನಯದ ಮಫ್ತಿ ಚಿತ್ರ ಬಂದು ಈಗ 6 ವರ್ಷಗಳೇ ಕಳೆದಿವೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಮತ್ತು ಶ್ರೀಮುರಳಿ ಪಾತ್ರಗಳು ಈ ಚಿತ್ರದಲ್ಲಿ ವಿಭಿನ್ನವಾಗಿದ್ದವು. ಕನ್ನಡಿಗರಿಗೆ ಈ ಚಿತ್ರದ ಕಥೆ ನಿಜಕ್ಕೂ ವಿಶೇಷವಾಗಿಯೇ ಕಾಣಿಸಿಕೊಂಡಿತ್ತು. ಸಿನಿಪ್ರೇಮಿಗಳು ಈ ಚಿತ್ರದ ಶಿವಣ್ಣ ಪಾತ್ರವನ್ನ ಬಹುವಾಗಿಯೇ ಮೆಚ್ಚಿದ್ದರು. ರೋರಿಂಗ್ ಸ್ಟಾರ್ ಶ್ರೀಮುರಳಿ (Roaring Star Srii Murali) ಇಲ್ಲಿ ತಮ್ಮ ಅಭಿಮಾನಿಗಳಿಗೆ ಬೇರೆ ರೀತಿನೇ ಕಂಡ್ರು. ಡೈರೆಕ್ಟರ್ ನರ್ತನ್ ಈ ಚಿತ್ರದ ಮೂಲಕ ಭರವಸೆಯ ಡೈರೆಕ್ಟರ್ ಆಗಿದ್ದಾರೆ. ಇವರು ಈ ಚಿತ್ರ ಬೇರೆ ಭಾಷೆಯವರನ್ನು ಕೂಡ ಸೆಳೆದಿತ್ತು. ಆ ಹಿನ್ನೆಲೆಯಲ್ಲಿ ಆಗಲೇ ಈ ಚಿತ್ರ ರಿಮೇಕ್ (Mufti Remake in Tamil) ಸುದ್ದಿ ಹರಡಿತ್ತು.ಹಾಗೆ ಈ ಚಿತ್ರ ರಿಮೇಕ್ ಕೂಡ ಆಗಿದೆ. ಅದೇ ತಮಿಳು ಚಿತ್ರ ಈಗ ರಿಲೀಸ್ಗೆ ರೆಡಿ ಆಗಿದೆ.ಕನ್ನಡದ ಮಫ್ತಿ ತಮಿಳಿನಲ್ಲಿ ರಿಮೇಕ್-ಈಗ ರೆಡಿ ಟು ರಿಲೀಸ್ಕನ್ನಡದ ಮಫ್ತಿ ಸಿನಿಮಾ ತಮಿಳಿನಲ್ಲಿ ರಿಮೇಕ್ ಆಗಿದೆ. ಈ ಚಿತ್ರದ ಕಥೆಯ ಕ್ರೆಡಿಟ್ನ್ನ ಮೂಲ ಚಿತ್ರದ ನಿರ್ದೇಶಕ ನರ್ತನ್ ಅವರಿಗೆ ಕೊಟ್ಟಿದ್ದಾರೆ. ಆದರೆ ಇಲ್ಲಿ ಚಿತ್ರಕಥೆ ಬದಲಾಗಿದೆ. ಕಲಾವಿದರು ಬದಲಾಗಿದ್ದಾರೆ. ಕನ್ನಡದಲ್ಲಿ ಯಾರೆಲ್ಲ ಇದ್ದರೋ ಅವರಾರೂ ತಮಿಳು ಮಫ್ತಿ ಚಿತ್ರದಲ್ಲಿ ಇಲ್ವೇ
ಇಲ್ಲಕನ್ನಡದ ಮಫ್ತಿ ಚಿತ್ರಕ್ಕೆ ತಮಿಳಿನಲ್ಲಿ ರೆಹಮಾನ್ ಸಂಗೀತತಮಿಳು ಮಫ್ತಿ ಚಿತ್ರದಲ್ಲಿ ಕನ್ನಡಿಗನಿಗೆ ಚಾನ್ಸ್!ಇದೇ ಚಿತ್ರದಲ್ಲಿ ಅಭಿನಯಿಸಿದ್ದ ಸಿಂಗ ಪಾತ್ರಧಾರಿ ಮಧು ಗುರುಸ್ವಾಮಿ ಮಾತ್ರ ಇಲ್ಲಿದ್ದಾರೆ. ಇವರ ಪಾತ್ರ ಇಡೀ ಚಿತ್ರದಲ್ಲಿ ಅದ್ಭುತವಾಗಿಯೇ ಬಂದಿತ್ತು. ಅದನ್ನ ನೋಡಿಯೇ ತಮಿಳು ಸಿನಿಮಾ ತಂಡ ಕನ್ನಡದ ಮಧು ಅವರನ್ನ ಸಿಂಗ ಚಿತ್ರಕ್ಕೆ ಹಾಕಿಕೊಂಡಿದ್ರು.ತಮಿಳು ಮಫ್ತಿ ಚಿತ್ರದ ಬಗ್ಗೆ ಮಧು ಏನು ಹೇಳ್ತಾರೆ?ಕನ್ನಡದ ಮಫ್ತಿ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿ ಬಂದಿತ್ತು. ಜನ ಕೂಡ ಇದನ್ನ ಮೆಚ್ಚಿಕೊಂಡ್ರು. ಇದೇ ಚಿತ್ರ ತಮಿಳಿನಲ್ಲಿ ಈಗ ಪತ್ತು ತಲಾ (Pathu Thala) ಶೀರ್ಷಿಕೆಯಲ್ಲಿ ರಿಮೇಕ್ ಆಗಿದೆ. ಪತ್ತು ತಲಾ ಅಂದ್ರೆ ಹತ್ತು ತಲೆ ಅಂತಲೇ ಅರ್ಥ ಬರುತ್ತದೆ.ಮಫ್ತಿ ಚಿತ್ರದ ನನ್ನ ಸಿಂಗ ಪಾತ್ರವನ್ನ ಈ ಸಿನಿಮಾದವರು ನೋಡಿದ್ದರು. ಆಗ ತಮಿಳು ಚಿತ್ರದ ಸಿಂಗ ಪಾತ್ರಕ್ಕೆ ಇವರೇ ಬೇಕು ಅಂತಲೇ ನನ್ನ ಕರೆಸಿಕೊಂಡ್ರು. ಕನ್ನಡದ ಯಾವ ನಟ ಕೂಡ ತಮಿಳಿನ ಈ ಪತ್ತು ತಲಾ ಚಿತ್ರದಲ್ಲಿ ಇಲ್ವೇ ಇಲ್ಲ ಎಂದು ನಟ ಮಧು ಗುರುಸ್ವಾಮಿ ,ನ್ನ್ನ್ಲ್ಗೆ ತಿಳಿಸಿದ್ದಾರೆ.
ಚಿತ್ರ ಕಥೆ ಬಗ್ಗೆ ಮಧು ಗುರುಸ್ವಾಮಿ ಏನಂತಾರೆ?ಪತ್ತು ತಲಾ ಚಿತ್ರದಲ್ಲಿ ಕಥೆ ಏನೂ ಬದಲಾಗಿಲ್ಲ. ನರ್ತನ್ ಬರೆದ ಕಥೆಯನ್ನೆ ಇಟ್ಟುಕೊಂಡಿದ್ದಾರೆ. ಆದರೆ ಪತ್ತು ತಲಾ ಚಿತ್ರದ ಚಿತ್ರಕಥೆಯನ್ನ ಡೈರೆಕ್ಟರ್ ಒಬೆಲಿ ಎನ್ ಕೃಷ್ಣ ಸಂಪೂರ್ಣ ಬದಲಿಸಿದ್ದಾರೆ. ಬದಲಾದ ಚಿತ್ರಕಥೆಯೊಂದಿಗೆ ಕನ್ನಡದ ಮಫ್ತಿ ಅಲ್ಲಿ ರೆಡಿ ಆಗಿದೆ ಅಂತಲೇ ಮಧು ಗುರುಸ್ವಾಮಿ ತಿಳಿಸುತ್ತಾರೆ.ಶಿವಣ್ಣನ ಪಾತ್ರದಲ್ಲಿ ಸಿಂಬು-ಶ್ರೀಮುರಳಿ ಪಾತ್ರದಲ್ಲಿ ಗೌತಮ್ ಕಾರ್ತಿಕ್ ಅಭಿನಯಿಸಿದ್ದಾರೆ. ದೇವರಾಜ್ ಅವರ ಪಾತ್ರವನ್ನ ಗೌತಮ್ ವಾಸುದೇವ್ ಮನೆನ್ ನಿರ್ವಹಿಸಿದ್ದಾರೆ. ಸಿಂಗ ಪಾತ್ರವನ್ನ ನಾನು ಮಾಡುತ್ತಿದ್ದೇನೆ ಎಂದು ಮಧು ಹೇಳಿಕೊಳ್ತಾರೆ.
ಕನ್ನಡದ ಮಫ್ತಿ ಚಿತ್ರಕ್ಕೆ ತಮಿಳಿನಲ್ಲಿ ರೆಹಮಾನ್ ಸಂಗೀತ ಕನ್ನಡದ ಮಫ್ತಿ ಚಿತ್ರಕ್ಕೆ ಕನ್ನಡದಲ್ಲಿ ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಕೊಟ್ಟಿದ್ದರು. ಆದರೆ ತಮಿಳು ರಿಮೇಕ್ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಕೊಟ್ಟಿದ್ದಾರೆ.ಫೆಬ್ರವರಿ-03 ರಂದು ಸಿಂಬು ಜನ್ಮ ದಿನ ಆ ದಿನ ಹಾಡು ರಿಲೀಸ್ಪತ್ತು ತಲಾ ಚಿತ್ರದ ನಾಯಕ ನಟ ಸಿಂಬು ಅವರು ಇದೇ ಫೆಬ್ರವರಿ-03 ರಂದು ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನವೇ ಪತ್ತು ತಲಾ ಚಿತ್ರದ ಹಾಡನ್ನ ರಿಲೀಸ್ ಮಾಡೋಕೆ ಸಿನಿಮಾ ತಂಡ ಪ್ಲಾನ್ ಮಾಡುತ್ತಿದೆ.ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಮಾಡೋದಾ? ಇಲ್ಲವೇ ವಿಡಿಯೋ ಸಾಂಗ್ ರಿಲೀಸ್ ಮಾಡೋದಾ ಅನ್ನೋದು ಮಾತ್ರ ಇನ್ನೂ ಡಿಸೈಡ್ ಆಗಿಲ್ಲ ನೋಡಿ. ಇನ್ನುಳಿದಂತೆ ಚಿತ್ರದ ರಿಲೀಸ್ ಡೇಟ್
ಪ್ಲಾನ್ ಆಗಿ ಬಿಟ್ಟಿದೆ.ಫೆಬ್ರವರಿ-03 ರಂದು ಸಿಂಬು ಜನ್ಮ ದಿನ ಆ ದಿನ ಹಾಡು ರಿಲೀಸ್ಮಾರ್ಚ್-30 ರಂದು ಪತ್ತು ತಲಾ ಸಿನಿಮಾ ರಿಲೀಸ್ಮಫ್ತಿ ರಿಮೇಕ್ ಪತ್ತು ತಲಾ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸಿನಿಮಾ ಪ್ರೇಮಿಗಳಿಗೆ ಈ ಒಂದು ಚಿತ್ರವನ್ನ ಕೊಡಲು ಚಿತ್ರ ತಂಡ ಸಜ್ಜಾಗಿದೆ. ತಮಿಳು ಭಾಷೆಯಲ್ಲಿಯೇ ಮಾರ್ಚ್-30 ರಂದು ವಿಶ್ವದಾದ್ಯಂತ ಪತ್ತು ತಲಾ ಚಿತ್ರ ರಿಲೀಸ್ ಆಗುತ್ತಿದೆ.ಇದನ್ನೂ ಓದಿ: Darling Krishna-Milana: ಲವ್ ಬರ್ಡ್ಸ್ ಚಿತ್ರದಲ್ಲಿ ಪಳ ಪಳ ಹಾಡು!ಇನ್ನು ಚಿತ್ರಕ್ಕೆ ಸ್ಟುಡಿಯೋ ಗ್ರೀನ್ ಬಂಡವಾಳ ಹಾಕಿದೆ. ತಮಿಳಿನಲ್ಲಿ ಈ ಚಿತ್ರದ ಬಗ್ಗೆ ಒಂದು ಸಣ್ಣ ನಿರೀಕ್ಷೆನೂ ಇದೆ. ಪ್ರಚಾರದ ಕೆಲಸವೂ ಈಗ ಶುರು ಆಗಿದ್ದು, ತಮ್ಮ ಈ ಚಿತ್ರದ ಬಗ್ಗೆ ಕನ್ನಡದ ನಟ ಮಧು ಗುರುಸ್ವಾಮಿ ಅಧಿಕೃತವಾಗಿಯೇ ಈ ಎಲ್ಲ ಮಾಹಿತಿಯನ್ನ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.
Post a Comment