Salman Khan) ಕಳೆದ ಕೆಲವು ದಿನಗಳಿಂದ ತಮ್ಮ 'ಸಿಕಂದರ್’ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ತಮ್ಮ ಹೆತ್ತವರ ಬಗ್ಗೆ ಮುಕ್ತವಾಗಿ ಮಾತನಾಡಿದರು. ಸಲ್ಮಾನ್ ತಂದೆ ಸಲೀಂ ಖಾನ್ ಮೊದಲು ಸುಶೀಲಾ ಅವರನ್ನು ವಿವಾಹವಾದರು.
ಸಲೀಂ ಓರ್ವ ಮುಸ್ಲಿಂ ಮತ್ತು ಸುಶೀಲ್ ಓರ್ವ ಹಿಂದೂ. ಅವರ ಮೊದಲ ಹೆಸರು ಸುಶೀಲಾ. ಅವರನ್ನು ಸಲೀಂ ಖಾನ್ ಮದುವೆಯಾದ ನಂತರ, ಅವರು ತಮ್ಮ ಹೆಸರನ್ನು ಸಲ್ಮಾ ಖಾನ್ ಎಂದು ಬದಲಾಯಿಸಿಕೊಂಡರು. ಆ ಸಮಯದಲ್ಲಿ ತನ್ನ ಹೆತ್ತವರ ಮದುವೆಯಲ್ಲಿ ದೊಡ್ಡ ಅಡಚಣೆ ಧರ್ಮವಲ್ಲ, ಬೇರೇನೋ ಆಗಿತ್ತು ಎಂದು ಸಲ್ಮಾನ್ ಈ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಮದುವೆಗೂ ಮುನ್ನ ಸುಶೀಲಾಳ ಕುಟುಂಬಕ್ಕೆ ಸಲೀಂ ಜೊತೆ ಕೆಲವು ಸಮಸ್ಯೆಗಳಿದ್ದವು. ಆದರೆ ಆ ಸಮಸ್ಯೆ ಹಿಂದೂ-ಮುಸ್ಲಿಂ ಎಂಬ ವಿಭಿನ್ನ ಧರ್ಮಗಳಿಂದಲ್ಲ, ಬದಲಾಗಿ ಸಲೀಂ ಖಾನ್ ಅವರ ಚಲನಚಿತ್ರೋದ್ಯಮದ ವೃತ್ತಿಜೀವನದಿಂದಾಗಿ. 'ಹಿಂದಿ ಮತ್ತು ಮುಸ್ಲಿಂ ಅಥವಾ ಸಾಂಸ್ಕೃತಿಕ ಬದಲಾವಣೆಗಳ ಬಗ್ಗೆ ಅವರಿಗೆ ಎಂದಿಗೂ ಸಮಸ್ಯೆ ಇರಲಿಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ, ನನ್ನ ತಂದೆ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ ಎಂಬ ಅಂಶದ ಬಗ್ಗೆ ಅವರು ಹೆಚ್ಚು ಚಿಂತೆಗೆ ಒಳಗಾಗಿದ್ದರು' ಎಂದು ಸಲ್ಮಾನ್ ಹೇಳಿದರು.
ಸಲೀಂ ಖಾನ್ 1964 ರ ನವೆಂಬರ್‌ನಲ್ಲಿ ಸುಶೀಲಾ ಅವರನ್ನು ವಿವಾಹವಾದರು. ಮದುವೆಯ ನಂತರ ಅವರು ತಮ್ಮ ಹೆಸರನ್ನು ಸಲ್ಮಾ ಎಂದು ಬದಲಾಯಿಸಿಕೊಂಡರು. ಈ ದಂಪತಿಗೆ ಸಲ್ಮಾನ್, ಅರ್ಬಾಜ್, ಸೊಹೈಲ್ ಮತ್ತು ಅಲ್ವಿರಾ ಎಂಬ ನಾಲ್ವರು ಮಕ್ಕಳಿದ್ದಾರೆ. ಸಲೀಂ ನಟಿ ಹೆಲೆನ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ಸಲ್ಮಾನ್ ಮತ್ತು ಅವರ ಕುಟುಂಬ ಎಲ್ಲಾ ಹಬ್ಬಗಳನ್ನು ಉತ್ಸಾಹದಿಂದ ಆಚರಿಸುತ್ತದೆ. ದೀಪಾವಳಿಯಾಗಿರಲಿ, ಈದ್ ಆಗಿರಲಿ ಅಥವಾ ಗಣೇಶೋತ್ಸವವಾಗಲಿ… ಇಡೀ ಖಾನ್ ಕುಟುಂಬ ಒಟ್ಟಾಗಿ ಸೇರಿ ಹಬ್ಬಗಳನ್ನು ಆನಂದಿಸುತ್ತದೆ.
ಸಲೀಂ ಖಾನ್ ತಮ್ಮ ಮಗ ಅರ್ಬಾಜ್ ಅವರ ಕಾರ್ಯಕ್ರಮದಲ್ಲಿ ಹೆಲೆನ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದರು. 'ಆಗ ಅವಳು ಚಿಕ್ಕವಳಾಗಿದ್ದಳು, ನಾನು ಕೂಡ ಚಿಕ್ಕವನಾಗಿದ್ದೆ. ನನಗೆ ಯಾವುದೇ ತಪ್ಪು ಉದ್ದೇಶವಿರಲಿಲ್ಲ. ನಾನು ಅವಳಿಗೆ ಸಹಾಯ ಮಾಡಲು ಕೈ ಚಾಚಿದ್ದೆ. ಅದು ಯಾರಿಗಾದರೂ ಸಂಭವಿಸಬಹುದಾದ ಭಾವನಾತ್ಮಕ ಕ್ಷಣವಾಗಿತ್ತು' ಎಂದು ಅವರು ಹೇಳಿದ್ದರು. 1980ರಲ್ಲಿ, ಸಲೀಂ ಖಾನ್ ಮತ್ತು ಹೆಲೆನ್ ಅವರ ಪ್ರಣಯದ ಬಗ್ಗೆ ಬಿಸಿ ಚರ್ಚೆಗಳು ನಡೆದವು.
Post a Comment