ಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಹನಿಟ್ರ್ಯಾಪ್ ಪ್ರಕರಣ ಸದ್ದು ಮಾಡುತ್ತಿರುವ ನಡುವೆಯೇ ಸಿಎಂ ಕುರ್ಚಿ, ಕೆಪಿಸಿಸಿ ಪಟ್ಟಕ್ಕಾಗಿ ಪೈಪೋಟಿ ಮುಂದುವರಿದಿದೆ.
ನಾಲ್ಕು ದಿನಗಳ ಕಾಲ ಸಚಿವ ಸತೀಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ಉಳಿದುಕೊಂಡು ವರಿಷ್ಠರೊಂದಿಗೆ ಕೆಪಿಸಿಸಿ ಪಟ್ಟಕ್ಕಾಗಿ ಗ್ಯಾರಂಟಿ ಪಡೆದುಕೊಂಡು ಬಂದಿದ್ದಾರಂತೆ.
ಇದರ ಬೆನ್ನಲ್ಲೇ ಇಂದು ಸಚಿವ ಕೆ.ಜೆ.ಜಾರ್ಜ್ ಅವರ ಸರ್ಕಾರಿ ನಿವಾಸಕ್ಕ ಒಟ್ಟಿಗೆ ಖಾಸಗಿ ಕಾರಿನಲ್ಲಿ ಸಚಿವ ಪರಮೇಶ್ವರ್, ಸತೀಶ್ ಜಾರಕಿಹೊಳಿ ಅವರು ಆಗಮಿಸಿ, ರಹಸ್ಯ ಸಭೆ ನಡೆಸಿದ್ದಾರೆ. ಸತತ ಎರಡು ಗಂಟೆಗಳ ಕಾಲ ಮೀಟಿಂಗ್ ಮಾಡಿದ್ದು, ಕುತೂಹಲ ಮೂಡಿಸಿದೆ.
ಸಿಎಂ ಕುರ್ಚಿ ಲಿಸ್ಟ್ನಲ್ಲಿ ತಾವೂ ವ್ಹೈಟಿಂಗ್ ಲಿಸ್ಟ್ನಲ್ಲಿದ್ದೇವೆ. ಸದ್ಯ ಆರ್ಎಸಿ ಸೀಟ್ ಇದೆ. ಇಲ್ಲೇ ಇದ್ದು ಸಿಎಂಮ್ಮೂ, ಅಧ್ಯಕ್ಷನೂ ಆಗಬೇಕು ಎಂದು ಸತೀಶ್ ಅವರು ದಿಲ್ಲಿಯಿಂದ ಬೆಂಗಳೂರಿಗೆ ಬಂದು ನಿನ್ನೆಯಷ್ಟೇ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದರು. ಈ ಬೆನ್ನಲ್ಲೇ ಇಂದು ಜಾರ್ಜ್ ಅವರ ಮನೆಯಲ್ಲಿ ಸಭೆ ಸೇರಿ ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಸುವ ವಿಚಾರವಾಗಿ ಹೆಚ್ಚಾಗಿ ರಹಸ್ಯ ಚರ್ಚೆ ನಡೆಸಿರಬಹುದು ಎಂದೂ ಹೇಳಲಾಗುತ್ತಿದೆ.
ಕೆಲ ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರ ಅವಧಿ ಮುಕ್ತಾಯವಾಗುತ್ತಿದ್ದು, ಸಂಘಟನೆಯಲ್ಲಿ ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದ ಅಹಿಂದ ಮತಗಳ ಮೇಲೆ ಹಿಡಿತ ಕುಗ್ಗುವ ಭೀತಿ ಎದುರಾಗಿದೆ ಎಂದು ಸತೀಶ್ ಅವರು ಹೈಕಮಾಂಡ್ ಬಳಿ ದೂರು ನೀಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಹನಿಟ್ರ್ಯಾಪ್ ಕಥೆಯ ಹಿಂದಿನ ಮಹಾನಾಯಕ ಯಾರೂ ಎಂಬ ಚರ್ಚೆಯೂ ರಹಸ್ಯ ಸಭೆಯಲ್ಲಿ ನಡೆದಿದೆಯಂತೆ.
Post a Comment