ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ
ನವದೆಹಲಿ: ಭಾರತದ ಯಾವುದೇ ರಾಜ್ಯದ ಚುನಾವಣೆಯಿರಲಿ ಅಲ್ಲಿ ಹೆಚ್ಚು ಚರ್ಚೆಯಾಗುವುದು ವಲಸಿಗರ ಕುರಿತು. ಅದರಲ್ಲೂ ಬಾಂಗ್ಲಾದೇಶದ ವಲಸಿಗರ ಕುರಿತು ತುಸು ಹೆಚ್ಚಾಗಿಯೇ ಚರ್ಚೆಯಾಗುತ್ತದೆ. ಆದರೆ ಈ ವಲಸಿಗರ ಸಮಸ್ಯೆಗೆ ಮುಕ್ತಿ ನೀಡಲು ಮುಂದಾಗಿರು ಪ್ರಧಾನಿ ಮೋದಿ (Prime Minister Modi) ನೇತೃತ್ವದ ಕೇಂದ್ರ ಸರ್ಕಾರವು ವಲಸಿಗರು ಹಾಗೂ ವಿದೇಶಿಗರ ನಿಯಂತ್ರಣಕ್ಕಾಗಿ ಹೊಸ ಕಾನೂನನ್ನು ತರಲು ಮುಂದಾಗಿದೆ. ಆದರಂತೆ, ಇಂದು ಲೋಕಸಭೆಯಲ್ಲಿ (Lok Sabha) ವಲಸಿಗರು ಹಾಗೂ ವಿದೇಶಿಗರ ನಿಯಂತ್ರಣ ಕಾಯ್ದೆ 2025 (Immigration and Foreigners Bill, 2025) ಅಂಗೀಕಾರವಾಯಿತು.
ಇನ್ನು ಲೋಕಸಭೆಯಲ್ಲಿ ವಲಸಿಗರು ಹಾಗೂ ವಿದೇಶಿಗರ ನಿಯಂತ್ರಣ ಕಾಯ್ದೆಯನ್ನು ಮಂಡಿಸಿ, ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah in Rajya Sabha) ಅವರು, ವಲಸೆ ಒಂದು ಪ್ರತ್ಯೇಕ ಸಮಸ್ಯೆಯಲ್ಲ. ಯಾಕೆಂದ್ರೆ ದೇಶದ ಹಲವು ಸಮಸ್ಯೆಗಳು ಇದರೊಂದಿಗೆ ಸಂಬಂಧ ಹೊಂದಿವೆ ಎಂದರು. ಮುಂದುವರೆದು, ಭಾರತ 'ಧರ್ಮಶಾಲೆ' ಅಲ್ಲ; ಯಾಕೆಂದ್ರೆ ನಮ್ಮ ದೇಶದ ಗಡಿಯೊಳಗೆ ಯಾರು ಬರುತ್ತಾರೆ? ಯಾವಾಗ ಬರುತ್ತಾರೆ? ಮತ್ತು ಎಷ್ಟು ದಿನದ ಮಟ್ಟಿಗೆ ಇರುತ್ತಾರೆ? ಹಾಗೂ ಅವರು ಯಾವ ಉದ್ದೇಶಕ್ಕಾಗಿ ಬರುತ್ತಾರೆ? ಎಂದು ತಿಳಿಯುವುದು ಈ ದೇಶದ ಭದ್ರತೆಗೆ ಬಹಳ ಮುಖ್ಯವಾಗಿದೆ. ಆದ್ದರಿಂದ ಈ ಮಸೂದೆಯು ಇದನ್ನು ಖಚಿತಪಡಿಸುತ್ತದೆ. ಯಾಕೆಂದರೆ ಈಗ ಭಾರತಕ್ಕೆ ಬರುವ ಎಲ್ಲಾ ವಿದೇಶಿ ನಾಗರಿಕರ ಖಾತೆಗಳನ್ನು ನಿರ್ವಹಿಸಲಾಗುವುದು. ಆದ್ದರಿಂದ ಇದು ಭಾರತಕ್ಕೆ ಬರುವ ಜನರ ಡೇಟಾಬೇಸ್ ಸ್ವಯಂಚಾಲಿತವಾಗಿ ರಚಿಸಲ್ಪಡುತ್ತದೆ ಎಂದು ಹೇಳಿದರು.
Post a Comment